Doreya Nudige-Aniruddha Sastry

Doreya Nudige

专辑:Doreya Nudige

时间:2024-01-23

    使用手机浏览器「扫一扫」

    在手机上保存,获得更好体验

标签
歌词

ದೊರೆಯ ನುಡಿಗೆ ಧರೆಯ ಕೊಟ್ಟ

ಶ್ರೀ ರಾಮ ಸ್ವಾಮಿ ನಿನಗೆ ನಮಾಮಿ

ಸಾಕೇತ ರಾಜ ಸಾಮಾನ್ಯ ಮನುಜ

ಶ್ರೀ ರಾಮ ಸ್ವಾಮಿ ನಿನಗೆ ನಮಾಮಿ

ರಾಜ್ಯವ ತ್ಯಜಿಸೋ ಶ್ರೀಮಂತನು

ಬಲವಾಗಿ ನಿಲ್ಲೊ ಸ್ನೇಹಿತನು

ಒಲವಿಂದ ಕಾಯೋ ನಾಯಕನು

ಆದರ್ಶ ಪುರುಷ ಶ್ರೀರಾಮನು

ತಂದೆಯ ಮಾತಿಗೆ ತನ್ನವರ ಬಿಟ್ಟ

ಶ್ರೀ ರಾಮ ಸ್ವಾಮಿ ನಿನಗೆ ನಮಾಮಿ

ಪ್ರೀತಿಗಾಗಿ ಸಾಗರ ದಾಟಿದ

ಶ್ರೀ ರಾಮ ಸ್ವಾಮಿ ನಿನಗೆ ನಮಾಮಿ

ಶಕ್ತಿಗೂ ನಿನ್ನ ಹೆಸರು

ಭಕ್ತಿಗೂ ನಿನ್ನ ಹೆಸರು

ಮುಕ್ತಿಗೆ ಒಂದೇ ಹೆಸರು

ಶ್ರೀ ರಾಮ

ಸೀತೆಗೂ ನೀನೇ ಉಸಿರು

ಹನುಮನಿಗೂ ನೀನೇ ಉಸಿರು

ಜಗಕೆಲ್ಲಾ ಒಂದೇ ಉಸಿರು

ಶ್ರೀ ರಾಮ

ನಿನ್ನಯ ಜನನ ಬಹುಮಾನ

ನಿನ್ನಯ ಮನನ ನಿಜಧ್ಯಾನ

ನಿನ ಜೀವನ ನಮಗೆ ನಿದರ್ಶನ

ನಿನ ಹಿಂದೆ ನಡೆದರೆ ಅದುವೆ ರಾಮಾಯಣ

ಮಾತೆಯ ತ್ರಾಣ ಮಾರುತಿ ಪ್ರಾಣ

ಶ್ರೀ ರಾಮ ಸ್ವಾಮಿ ನಿನಗೆ ನಮಾಮಿ

ಕಾದೆವು ನಾವು ನೂರಾರೂ ವರುಷ

ಮರಳಿ ಬಾ ಸ್ವಾಮಿ ಅಯೋಧ್ಯೆಗೆ ನೀ

展开显示全部歌词