
时间:2022-09-30
在手机上保存,获得更好体验
ಪಲ್ಲವಿ :
ಕರುಮದ ಕಲ್ಲನು
ಎಡವಿದ ಮನುಜನ
ಬೆರಳಿನ ಗಾಯವು.. ಮಾಯದು..
ಹಗೆಯಲಿ ಕೋವಿಗೆ
ತಲೆಕೊಡೊ ಮರುಳರ
ಗುಡಿಯಲಿ ದೈವವು.. ಕಾಯದು..
ಕತ್ತಲನು ಮಣಿಸೋಕೆ ಹಚ್ಚಿ ಇಟ್ಟ ದೀಪ..
ಊರೂರನ್ನೇ ಸುಡುವಂತ ಜ್ವಾಲೆ ಆಯಿತೇನೋ..
ಚರಣ :
ಗರ್ಭದಲೇ.. ಆದ ಗಾಯ..
ಹಣೆ ಬರಹ..
ಬದುಕಿಡೀ ಮದ್ದು ಹುಡುಕಿ..
ಅಲೆದಾಡುವೆ..
ಯಾರ ಜತೆ.. ಅರಿಯದೇ..
ನಿನ ಕಲಹ..
ನಿನ್ನನ್ನೇ ನೀನು ಹುಡುಕಿ..
ಕಳೆದೋಗುವೆ..
ನುಂಗಿಕೊಂಡರೂನು..
ಮಾಡೋ ಪಾಪನೇಲ್ಲಾ ಗಂಗೆ
ಬಿಟ್ಟು ಹೋಗುತಾಳೆ..
ಪಶ್ಚಾತಾಪ ನಂಗೆ ನಿಂಗೆ..
ದರ್ಪದಲಿ ಮೆರೆವಾಗ ತೊಟ್ಟ ಹೂವ ಮಾಲೆ
ನಾಳೇಗೆ ಹೂ ಉದುರಿ ಕುಣಿಕೆ ಆಗದೇನೊ..