
在手机上保存,获得更好体验
(ಪಲ್ಲವಿ)
ಗಣೇಶ ಬಂದ ಕಾಯ್ ಕಡುಬು ತಿಂದ
ಚಿಕ್ಕ್ ಕೆರೇಲ್ ಬಿದ್ದ ದೊಡ್ಡ್ ಕೆರೇಲ್ ಎದ್ದ ನೋಡ್...
ಊರಲ್ಲು ನೀನೆ ಗಣೇಶ ಗಣೇಶ
ಏರಿಯಾಲು ನೀನೆ ಗಣೇಶ ಗಣೇಶ
ಮನೆಯಲ್ಲು ನೀನೆ ಗಣೇಶ ಗಣೇಶ
ಮನ್ಸಲ್ಲು ನೀನೆ ಗಣೇಶ ಗಣೇಶ
ನಮ್ ಹಂಗೆ ನೀನು ಬ್ಯಾಚುಲರ್ ಮ್ಯಾನು
ನಾವೆಲ್ರು ನಿಂಗೀಗ ಫ್ಯಾನು.......
ಬಂದ ಬಂದ ಬಂದ ನೋಡು
ನಮ್ಮ ಬಾಸು ಗಣೇಶ
ಬಂದ ನೋಡು ಬಂದ ನೋಡು
ನಮ್ಮ ಫ್ರೆಂಡು ಗಣೇಶ
ಬಂದ ಬಂದ ಬಂದ ಬಂದ
ನಮ್ಮ ಬಾಸು ಗಣೇಶ
ನಾವೆಲ್ಲ ಸೇರ್ಕಂಡು ಜಮಾಯ್ಸೋದೆ ಈ ವರ್ಷ ......
(ಚರಣ-2)
ವಿದ್ಯೆ ಇಲ್ದಿರೋರ್ಗೆ ವಿದ್ಯೆ ನೀಡೊ ಗಣೇಶ
ಕೆಲ್ಸ ಇಲ್ದ್ರಿರೋರ್ಗೆ ಕೆಲ್ಸ ಕೊಡ್ಸು ಬಾ.......
ಹೈಕ್ಳು ಸಿಕ್ಕಾಪಟ್ಟೆ ದಾರಿ ತಪ್ಪಿ ಹೊಂಟೋಗವ್ರೆ
ನೀನೆ ಒಂದು ಒಳ್ಳೆ ದಾರಿ ತೋರ್ಸು ಬಾ.......
ಎಲ್ಲ ಧರ್ಮ ಒಂದೆ ಅನ್ನೊ
ಪಾಠ ಹೇಳಿ ಮುಂದೆ ಹೋಗೊ...
ಸೋತಾಗ ಕೈಹಿಡ್ದು ಕಾಪಾಡೊ ಗಣೇಶ
ಎಲ್ಲಾರ್ಗು ಒಳ್ಳೆದೆ ಮಾಡಪ್ಪ ವಿಘ್ನೇಶ.......(ಪಲ್ಲವಿ)